ಈ ರೀತಿಯೆಲ್ಲಿ ಚಿಕನ್ ಅಡುಗೆ ಟ್ರೈ ಮಾಡಿ ನೋಡಿ
ಪ್ರತೀಬಾರಿ ಚಿಕನ್ ಅಡುಗೆ ಮಾಡುವಾಗ ಒಂದೇ ರುಚಿಯಲ್ಲಿ ಮಾಡಿ ಬೋರಾಗಿದೆಯೇ? ಹಾಗಾದರೆ ಈ ಕೂಲ್ ಸೌತೆಕಾಯಿ ಚಿಕನ್ ಅಡುಗೆ ಟ್ರೈ ಮಾಡಬಾರದೇಕೆ? ಚಿಕನ್ ಅಡುಗೆಗೆ ಸೌತೆಕಾಯಿ ಸೇರಿಸಿದರೆ ವಿಶಿಷ್ಟವಾದ ಸ್ವಾದ ಹೊಂದಿರುತ್ತದೆ. ಈ ಸ್ಪೆಷಲ್ ಚಿಕನ್ ಅಡುಗೆ ಸೂಪರ್ ಟೇಸ್ಟ್ ಹೊಂದಿದ್ದು, ಇದನ್ನು ಮಾಡುವ ವಿಧಾನವನ್ನು ಇಲ್ಲಿ ಹೇಳಿದ್ದೇವೆ ನೋಡಿ: ಬೇಕಾಗುವ ಸಾಮಾಗ್ರಿಗಳು ಚಿಕನ್ 1 ಕೆಜಿ ಆಲೂಗಡ್ಡೆ 2(ಸಿಪ್ಪೆ ಸುಲಿದು ಚೌಕಾಕಾರದಲ್ಲಿ ಕತ್ತರಿಸಿದ್ದು) ಸೌತೆಕಾಯಿ 1-2(ದೊಡ್ಡದಾತ್ರದ ಸೌತೆಕಾಯಿ ಆದರೆ 1 ಸಾಕು) ಮೊಸರು 1 ಕಪ್ ಈರುಳ್ಳಿ2 ಟೊಮೆಟೊ 1 ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ 3-4 ಎಸಳು ಬೆಳ್ಳುಳ್ಳಿ ರುಚಿಗೆ ತಕ್ಕ ಉಪ್ಪು ಏಲಕ್ಕಿ2 ಒಂದೂವರೆ ಇಂಚಿನಷ್ಟು ದೊಡ್ಡದಿರುವ ಚಕ್ಕೆ ( ಪುಡಿ ಮಾಡಿದ್ದು) ಕ್ಯಾಪ್ಸಿಕಂ1 ಟೊಮೆಟೊ 1 ಅರಿಶಿಣ ಪುಡಿ -ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು ಖಾರದ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು ಕೊತ್ತಂಬರಿ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು ಜೀರಿಗೆ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ...