ಹರಿಯಾಲಿ ಮಟನ್-ಬಕ್ರೀದ್ ಸ್ಪೆಷಲ್

ಬಕ್ರೀದ್ ಹಬ್ಬಕ್ಕೆ ಮಟನ್ ಬಳಸಿ ತರಾವರಿಯ ಮಟನ್ ಖಾದ್ಯಗಳನ್ನು ತಯಾರಿಸಲಾಗುವುದು. ಈ ಬಕ್ರೀದ್ ಗೆ ವಿಶೇಷ ಹಬ್ಬದ ಅಡುಗೆಯಾಗಿ ಹರಿಯಾಲಿ ಮಟನ್ ರೆಸಿಪಿ ನೀಡಿದ್ದೇವೆ. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಮಾಡುವ ಈ ಮಟನ್ ಸಾರು ಸುವಾಸನೆಯ ಜೊತೆಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.
 ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು 


ಮಟನ್ 1 ಕೆಜಿ 

ಕೊತ್ತಂಬರಿ ಸೊಪ್ಪು 1 ಕಟ್ಟು
 ಹಸಿ ಮೆಣಸಿನಕಾಯಿ 3 
ಈರುಳ್ಳಿ 3 
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಗೋಡಂಬಿ 6-7 
ನಕ್ಷತ್ರ ಮೊಗ್ಗು 1 
ಚಕ್ಕೆ 1 
ಲವಂಗ 3
 ಜೀರಿಗೆ ಪುಡಿ 1 ಚಮಚ
 ಕೊತ್ತಂಬರಿ ಪುಡಿ 2 ಚಮಚ 
ರುಚಿಗೆ ತಕ್ಕ ಉಪ್ಪು 
ಎಣ್ಣೆ 3 ಚಮಚ 
ಫ್ರೆಶ್ ಕ್ರೀಮ್1 ಚಮಚ 
ನೀರು 2 ಕಪ್


ತಯಾರಿಸುವ ವಿಧಾನ: 

* ಮಟನ್ ಅನ್ನು ಕ್ಲೀನ್ ಮಾಡಿ.
 * ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಮಿಕ್ಸಿಗೆ ಹಾಕಿ, ಹಸಿ ಮೆಣಸಿನಕಾಯಿ ಹಾಕಿ ಗ್ರೈಂಡ್ ಮಾಡಿ.
* ಈರುಳ್ಳಿ, ಗೋಡಂಬಿ, ಚಕ್ಕೆ, ನಕ್ಷತ್ರ ಮೊಗ್ಗು(anise), ಚಕ್ಕೆ, ಲವಂಗ, ಕರಿ ಮೆಣಸು ಹಾಕಿ ಪೇಸ್ಟ್ ಮಾಡಿ. 
* ಪ್ಯಾನ್ ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ರುಬ್ಬಿದ ಈರುಳ್ಳಿ ಮಿಶ್ರಣದ ಪೇಸ್ಟ್ ಹಾಕಿ. 5-6 ನಿಮಿಷ ಸೌಟ್ ನಿಂದ ಆಡಿಸಿ. * ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ. 
* ಈಗ ಜೀರಿಗೆ, ಕೊತ್ತಂಬರಿ ಬೀಜ, ಜೀರಿಗೆ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ರುಬ್ಬಿದ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ, ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಟನ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆ ಬೇಯಿಸಿ( ಹೀಗೆ ಬೇಯಿಸುವಾಗ ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ).
 * ಮಟನ್ ಸಂಪೂರ್ಣ ಬೆಂದ ನಂತರ ಫ್ರೆಶ್ ಕ್ರೀಮ್ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿದರೆ ಮಟನ್ ಕರಿ ರೆಡಿ.
 ಇತರ 7 ಬಗೆಯ ಮಟನ್ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ.


Comments

Popular posts from this blog

ಹುಳಿ ಹುಳಿ ಹುಣಸೆಹಣ್ಣಿನ ಭಾತ್

ವಿಶೇಷ ಬೆಂಗಾಲಿ ರೆಸಿಪಿ ಫಿಶ್ ಕಬಿರಾಜಿ ಕಟ್ಲೇಟ್

ಪಟಾ ಪಟ್ ಚಿಕನ್ ಮಂಚೂರಿ