Posts

Showing posts from August, 2017

ಬಟರ್ ಚಿಕನ್

Image
ಬೇಕಾಗುವ ಸಾಮಾಗ್ರಿಗಳು: ಶುಚಿಮಾಡಿದ ಚಿಕನ್ - 300 ಗ್ರಾಂ ಉಪ್ಪು - ರುಚಿಗೆ ತಕ್ಕಷ್ಟು ಗೋಡಂಬಿ ಮತ್ತು ಬಾದಾಮಿ ಪೇಸ್ಟ್- ಸ್ವಲ್ಪ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 2 ಚಮಚ ಈರುಳ್ಳಿ - 1 ಅರಶಿನ ಪುಡಿ - ಕಾಲು ಚಮಚ ಮೆಣಸಿನ ಹುಡಿ - ಎರಡು ಚಮಚ ಧನಿಯ ಪುಡಿ - 1 ಚಮಚ ಕೇಸರಿ ಬಣ್ಣ - 1 ಚಮಚ ಬೆಣ್ಣೆ - 3 ಚಮಚ ಎಣ್ಣೆ - 1 ಚಮಚ ಪಾಕ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ನೀರುಳ್ಳಿಯನ್ನು ಕೆಂಪಗೆ ಹುರಿಯಿರಿ. ಇದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಗೂ ನೀರು ಹಾಕಿ ಚೆನ್ನಾಗಿ ಕದಡಿಸುತ್ತಾ ಇರಿ.  ಅರಶಿನ ಹುಡಿ, ಮೆಣಿಸಿನ ಹುಡಿ, ಧನಿಯಾ ಹುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಮಾಡಿ. ಇದು ಬೇಯಲು ಪ್ರಾರಂಭವಾದಾಗ.ಇದಕ್ಕೆ ಕೇಸರಿ ಮತ್ತು ತುಂಡಿಮಾಡಿಟ್ಟುಕೊಂಡಿರುವ ಚಿಕನ್ ಸೇರಿ. ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ದಪ್ಪವಾಗುವವರೆಗೆ ಬೇಯಿಸಿ ಕೊನೆಯಲ್ಲಿ ಬೆಣ್ಣೆಯನ್ನು ಹಾಕಿ. ಇದುಚಪಾತಿ, ಪರೋಟ ತಿನ್ನಲು ರುಚಿಯಾಗಿರುತ್ತದೆ.

ಹುಳಿ ಹುಳಿ ಹುಣಸೆಹಣ್ಣಿನ ಭಾತ್

Image
ಬೇಕಾಗುವ ಪದಾರ್ಥಗಳು ಬಾಸುಮತಿ ಅಕ್ಕಿ 2 ಕಪ್ ಹುಣಸೆಹಣ್ಣು 200 ಗ್ರಾಂ ಅಚ್ಚ ಖಾರದಪುಡಿ 4 ಚಮಚ ಒಣ ಮೆಣಸಿನಕಾಯಿ 6 ಬೆಲ್ಲ ನಿಂಬೆಹಣ್ಣು ಗಾತ್ರದಷ್ಟು ಕಡಲೆಬೀಜ 3 ಚಮಚ ಕರಿಬೇವು, ಸಾಸಿವೆ, ಉಪ್ಪು, ಎಣ್ಣೆ ತಯಾರಿಸುವ ವಿಧಾನ ಇದನ್ನು ತಯಾರಿಸುವಾಗ ಪೂರ್ತಿ ಬಾಸುಮತಿ ಅಕ್ಕಿ ಬೇಕಿಲ್ಲದಿದ್ದರೆ, ದಿನಬಳಸುವ ಸೋನಾ ಮಸೂರಿ ಅಕ್ಕಿ ತೆಗೆದುಕೊಂಡು ಸಣ್ಣ ಹಿಡಿಯಷ್ಟು ಬಾಸುಮತಿ ಅಕ್ಕಿಯನ್ನು ಅದಕ್ಕೆ ಬೆರೆಸಬಹುದು. ಮೊದಲಿಗೆ ಅಕ್ಕಿಯನ್ನು ಸುಮಾರು ಅರ್ಧಗಂಟೆ ಕಾಲ ನೀರಿನಲ್ಲಿ ನೆನೆಯಿಡಿ. ಹುಣಸೆಹಣ್ಣಿನಲ್ಲಿನ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಮಾಡಿ ಅದನ್ನೂ ನೀರಿನಲ್ಲಿ ನೆನೆಯಿಡಿ. ಒಂದು ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಚಟಪಟ ಅನ್ನಿಸಿ, ಅದಕ್ಕೆ ಒಣಮೆಣಸಿನಕಾಯಿ ಮತ್ತು ಕಡಲೆ ಬೀಜ ಹಾಕಿ ಚೆನ್ನಾಗಿ ತಾಳಿಸಿರಿ. ಒಗ್ಗರಣೆ ಹಾಕುವ ಕಾರ್ಯಕ್ಕೆ ಅಕ್ಕಿ ನೆನೆಸಿಟ್ಟು ಅರ್ಧ ಗಂಟೆ ನಂತರವೇ ಕೈಹಾಕಿದರೆ ಒಳಿತು. ಅಷ್ಟೊತ್ತಿಗೆ ಅಕ್ಕಿಯೂ ನೆಂದಿರುತ್ತದೆ ಮತ್ತು ಹುಣಸೆಹಣ್ಣಿನ ರಸವನ್ನೂ ತೆಗೆದಿಟ್ಟುಕೊಂಡಿರಬಹುದು. ಒಗ್ಗರಣೆಗೆ ತುಂಡು ಬೆಲ್ಲ, ಅಚ್ಚ ಖಾರದಪುಡಿ, ಹುಣಸೆರಸ ಎಲ್ಲ ಹಾಕಿ ಕಾಲು ಲೋಟ ನೀರು ಹಾಕಿ ಕುದಿಸಿರಿ. ಕುದಿಬಂದ ನಂತರ ಅದಕ್ಕೆ ನೆನೆಯಿಟ್ಟ ಅಕ್ಕಿಯನ್ನು ಹಾಕಿ ಬೇಯಿಸಿ. ಇವೆಲ್ಲವನ್ನು ಕುಕ್ಕಿರಿಗೆ ಸುರಿದುಕೊಂಡು ನಾಲ್ಕೈದು ವಿಷಲ್ ಹೊಡೆಸಿದ ನಂತರ ಇಳಿಸಿದರೆ ಉತ್ತಮ. ಬೇಕಿದ್ದರೆ ಅಕ...

ಪನ್ನೀರ್-ಚಿಕನ್ ಗ್ರೇವಿ, ಸ್ವಲ್ಪ ಖಾರ, ಸಕತ್ ರುಚಿ

Image
ಕೋಳಿಮಾಂಸದಿಂದ ಮಾಡಬಹುದಾದ ಖಾದ್ಯಗಳನ್ನು ಸಸ್ಯಾಹಾರಿಗಳಿಗೆ ಒಪ್ಪುವಂತೆ ಮಾಡಬೇಕಾದರೆ ಯಾವ ಸಾಮಾಗ್ರಿ ಸೂಕ್ತ? ಈ ಪ್ರಶ್ನೆಗೆ ಉತ್ತರ, ಪನ್ನೀರ್. ಸರಿಸುಮಾರು ಮಾಂಸಾಹಾರದ ಅಡುಗೆಗಳಲ್ಲಿ ಮಾಂಸಾಹಾರದ ಬದಲಿಗೆ ಪನ್ನೀರ್ ಹಾಕಿ ಸರಿಸುಮಾರು ಮಾಂಸಾಹಾರದ್ದೇ ರುಚಿಯನ್ನು ಪಡೆಯಬಹುದು. ಒಂದು ವೇಳೆ ಇವೆರಡನ್ನೂ ಒಂದೇ ಖಾದ್ಯದಲ್ಲಿ ಸೇರಿಸಿದರೆ? ಅದ್ಭುತ ಕಲ್ಪನೆ! ಮೃದುವಾದ ಪನ್ನೀರ್ ಮತ್ತು ಬಾಯಲ್ಲಿ ಕರಗುವ ಕೋಳಿಮಾಂಸದ ಜೊತೆ ನಿಮ್ಮ ಜಿಹ್ವಾಚಾಪಲ್ಯವನ್ನು ಬಹಳಷ್ಟು ಹೆಚ್ಚಿಸುತ್ತದೆ. ಅದರಲ್ಲೂ ಇದಕ್ಕೆ ಬಳಸುವ ಮಸಾಲೆಗಳನ್ನು ಕೊಂಚ ಹೆಚ್ಚು ಕಡಿಮೆ ಮಾಡಿ ಹಲವು ವೈವಿಧ್ಯಗಳನ್ನು ಪಡೆಯಬಹುದು.  ಪನ್ನೀರ್ ಹಾಲಿನಿಂದ ಮಾಡಿರುವ ಕಾರಣ ಹಾಲಿನ ಗುಣಗಳನ್ನೆಲ್ಲಾ ಪಡೆದಿರುತ್ತದೆ. ಮುಖ್ಯವಾಗಿ ಹಾಲಿನ ಕ್ಯಾಲ್ಸಿಯಂ ಪನ್ನೀರಿನಲ್ಲಿಯೂ ಇದ್ದು ಹಾಲಿಗಿಂತ ಹೆಚ್ಚು ಸಾಂದ್ರೀಕೃತವಾದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ. ಇತ್ತ ಕೋಳಿಮಾಂಸದಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಒಟ್ಟಾರೆ ಇದು ದೇಹಕ್ಕೆ ಅತ್ಯಂತ ಪುಷ್ಟಿಕರ ಆಹಾರವಾಗಿದೆ. ಬನ್ನಿ, ಇಂದು ಈ ಜೋಡಿಯಿಂದ ಖಾರವಾದ ಸಾರನ್ನು ಹೇಗೆ ಮಾಡುವುದೆಂದು ಕಲಿಯೋಣ: 8 ಬಗೆಯ ಸ್ವಾದಿಷ್ಟಕರ ಪನ್ನೀರ್ ರೆಸಿಪಿ  ಅಗತ್ಯವಿರುವ ಸಾಮಾಗ್ರಿಗಳು  *ಕೋಳಿಮಾಂಸ : ಅರ್ಧ ಕೇಜಿ (ತಾಜಾ ಕೋಳಿ ಉತ್ತಮ) *ಪನ್ನೀರ್ : ನೂರು ಗ್ರಾಂ  *ಟೊ...

ಆಲೂ ಮಂಚೂರಿ: ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

Image
ಮಳೆಗಾಲ ಬಂತೆಂದರೆ ಸಾಕು, ನಮ್ಮ ನಾಲಿಗೆಯ ಚಪಲವು ಹೆಚ್ಚಾಗುತ್ತದೆ. ಜಿಟಿ ಜಿಟಿ ಎಂದು ಒಂದೇ ಸಮನೆ ಹೊರಗೆ ಮಳೆ ಬೀಳುತ್ತಿದ್ದರೆ, ಒಳಗೆ ಬೆಚ್ಚಗೆ ಕೂತು ಬಿಸಿ ಬಿಸಿಯಾದ, ನಾಲಿಗೆಗೆ ಚಟಪಟ ಎಂದು ರುಚಿಸುವ, ಯಾವುದಾದರು ಖಾರವಾದ ಕರಿದ ತಿನಿಸನ್ನು ತಿನ್ನಬೇಕೆಂದು ಮನಸ್ಸು ಬಯಸುವುದು ಸಹಜವೇ ಸರಿ. ಮಾರುಕಟ್ಟೆಗೆ ಹೋದರೆ, ಬೇಕಾದಷ್ಟು ಚಾಟ್ ಅಂಗಡಿಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಇಂತಹ ಖಾದ್ಯಗಳು ನಮ್ಮನ್ನು ಆಕರ್ಷಿಸದೇ ಬಿಡುವುದಿಲ್ಲ. ಆದರೆ, ಮೇಲಿಂದ ಮೇಲೆ ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.  ಅದರಲ್ಲೂ ಮಳೆಗಾಲದಲ್ಲಿ ನಮ್ಮ ಶರೀರವು ಅನೇಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ, ಮನೆಯಲ್ಲೇ ನಾವು ಇಷ್ಟಪಡುವ ಖಾದ್ಯಗಳನ್ನು ಮಾಡಿ ತಿಂದರೆ, ರುಚಿಶುಚಿಯಾಗಿಯೂ ಇರುತ್ತದೆ ಮತ್ತು ಆರೋಗ್ಯಕರವಾಗಿಯೂ ಇರುತ್ತದೆ.  ಮನೆಯಲ್ಲಿಯೆ ಆನಂದಿಸಿ ಗೋಬಿ ಮಂಚೂರಿ ರುಚಿ ಸಾಮಾನ್ಯವಾಗಿ ಮನೆಯಲ್ಲಿರುವ ಸಾಮಗ್ರಿಗಳನ್ನೇ ಉಪಯೋಗಿಸಿ ತಯಾರು ಮಾಡುವ ಒಂದು ಸುಲಭವಾದ ರೆಸಿಪಿ ಇಲ್ಲಿದೆ ನೋಡಿ. ಅದುವೇ "ಆಲೂ ಮಂಚೂರಿ". ಹೌದು ಈ ತಿನಿಸಿನ ಹೆಸರು ಕೇಳಿದರೇ ಸಾಕು, ಬಾಯಲ್ಲಿ ನೀರೂರುವುದು ಖಂಡಿತ. ಇನ್ನು ಮಕ್ಕಳಂತೂ ಮಂಚೂರಿ ಎಂದರೆ ಸಾಕು, ಸಂಭ್ರಮಪಟ್ಟು ತಿನ್ನುತ್ತಾರೆ.  ಅತಿಥಿಗಳು ಬಂದಾಗ ಕೂಡ ಈ ಖಾದ್ಯವನ್ನು ಮಾಡಿಕೊಟ್ಟು ಅವರನ್ನು ತೃಪ್ತಿ ಪಡಿಸಬಹುದು. ಹಾಗಿದ್ದರೆ ಬನ್ನಿ.....

ಬೆಂಗಾಲಿ ಚಿಕ್ಕನ್ ಕರಿ

Image
ಬೇಕಾಗುವ ಸಾಮಗ್ರಿಗಳು : ಚಿಕ್ಕನ್ ತುಂಡುಗಳು - 1 ಬೌಲ್  ಈರುಳ್ಳಿ - 2 ಏಸಳು ಕರಿಬೇವು - 4  ದಾಲ್‌ಚೀನಿ - ಸ್ವಲ್ಪ ಪಾಕ ವಿಧಾನ: ಚಿಕನ್‌ಗೆ ಉಪ್ಪು, ಖಾರದ ಪುಡಿ ಮತ್ತು ಎಣ್ಣೆ ಹಾಕಿ 1 ಗಂಟೆಗಳ ಕಾಲ ನೆನೆಯಲು ಬಿಡಿ. ಬಾಣಲೆಯಲ್ಲಿ  ಸ್ವಲ್ಪ ಎಣ್ಣೆ ಹಾಕಿ ಲವಂಗ ದಾಲ್‌ಚೀನಿ, ಕರಿಬೇವು ಎಲ್ಲವನ್ನು ಸ್ವಲ್ಪ ಬಣ್ಣ ಬರುವವರೆಗೂ ಹುರಿದುಕೊಂಡು ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿಕೊಂಡು ಕಂದು ಬಣ್ಣ ಬರುವವರೆಗೂ ಹುರಿಯಿರಿ.  ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ ಕೊನೆಯಲ್ಲಿ ಅದರಲ್ಲಿ ಚಿಕ್ಕನ್ ಬೆರಸಿ 5-6 ನಿಮಿಷ ಹೆಚ್ಚಿನ ಶಾಖದಲ್ಲಿ ಬೇಯಿಸಿ.

ರುಚಿ ರುಚಿ ನೆಲ್ಲಿಕಾಯಿ ಉಪ್ಪಿನಕಾಯಿ ಹಾಕಿ

Image
ಬೆಂಗಳೂರು: ನೆಲ್ಲಿಕಾಯಿ ಇಷ್ಟವಿಲ್ಲದವರು ಯಾರು? ಅದರಲ್ಲೂ ಉಪ್ಪಿನಕಾಯಿ ಇಷ್ಟಪಡದವರು ಇಲ್ಲವೇ ಇಲ್ಲ. ನೆಲ್ಲಿಕಾಯಿ ಬಳಸಿ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು ನೆಲ್ಲಿಕಾಯಿ ಕೆಂಪು ಮೆಣಸು ಉಪ್ಪು ಹುಳಿ ಅರಸಿನ ಪುಡಿ ಜೀರಿಗೆ ಸಾಸಿವೆ ಮೆಂತೆ ಇಂಗು ಎಣ್ಣೆ ಮಾಡುವ ವಿಧಾನ  ನೆಲ್ಲಿಕಾಯಿಯನ್ನು ತೊಳೆದು ಉಪ್ಪು, ಅರಸಿನ ಹಾಕಿದ ನೀರಲ್ಲಿ ಬೇಯಿಸಿಕೊಳ್ಳಿ. ಬೆಂದ ಮೇಲೆ ಇದರ ಬೀಜ ತೆಗೆದುಕೊಳ್ಳಿ. ಒಂದು ಬಾಣಲೆಯಲ್ಲಿ ಸಾಸಿವೆ, ಮೆಂತೆ, ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ. ಒಣಮೆಣಸು, ಇಂಗನ್ನು ಎಣ್ಣೆ ಹಾಕಿ ಫ್ರೈ ಮಾಡಿ. ಇದನ್ನು ಹುಣಸೆ ಹುಳಿ ಜತೆ ಸೇರಿಸಿ ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ. ಈ ಪುಡಿಯನ್ನು ಬೀಜ ತೆಗೆದ ನೆಲ್ಲಿಕಾಯಿ ಹೋಳು ತಣ್ಣಗಾದ ಮೇಲೆ ಉಪ್ಪು ನೀರು ಹಾಕಿಕೊಂಡು ಮಿಕ್ಸ್ ಮಾಡಿ. ಉಪ್ಪಿನಕಾಯಿ ಎಷ್ಟು ತೆಳ್ಳಗಾಗಬೇಕೋ ಅಷ್ಟು ಉಪ್ಪು ನೀರು ಹಾಕಿಕೊಂಡರೆ ಆಯಿತು. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಮಟನ್ ಪೈಡ್ ರೈಸ್

Image
ಬೇಕಾಗುವ ಸಾಮಗ್ರಿಗಳು :  ಬಾಸುಮತಿ ಅಕ್ಕಿ 200  ಗ್ರಾಂ  ಶುಂಠಿ ಮತ್ತು ಗಾರ್ಲಿಕ್ ಪೇಸ್ಟ್ ಚಮಚ 1 ಈರುಳ್ಳಿ,2 ಟೊಮೇಟೊ ಎಲಕ್ಕಿ, ಲವಂಗ ಮತ್ತು ದಾಲಚೀನಿ  ಗೋಡಂಬಿ 4 ಗ್ರಾಂ  ತುಪ್ಪ 200 ಗ್ರಾಂ  ಮಟನ್ 150 ಗ್ರಾಂ  ಗರಂ ಮಸಲಾ ಪುಡಿ 3 ಚಮಚ, ಸ್ವಲ್ಪ ಪುದಿನಾ ಎಲೆಗಳು  2 ಲಿಂಬೆ ಹಣ್ಣು  ಮಾಡುವ ವಿಧಾನ :  ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಟೊಮೇಟೊ ಮತ್ತು ಈರುಳ್ಳಿಯನ್ನು ಚನ್ನಾಗಿ ಬೇಯಿಸಿಕೊಳ್ಳಿ.  ಮೇಲಿನ ಎಲ್ಲ ಮಸಾಲೆಯನ್ನು ಚನ್ನಾಗಿ ಸೇರಿಸಿಕೊಳ್ಳಿ, ಅದಕ್ಕೆ ಶುಂಠಿ ಮತ್ತು ಗರ್ಲಿಕ್ ಪೇಸ್ಟ್ ಅದಕ್ಕೆ ಸೇರಿಸಿ ಮತ್ತು ಗರಂ ಮಸಾಲ ಮತ್ತು ಖಾರದ ಪುದಿಯನ್ನು ಸೇರಿಸಿಕೊಳ್ಳಿ ಇದಕ್ಕೆ ಸ್ವಲ್ಪ ನೀರನ್ನು ಬೆರಸಿಕೊಳ್ಳಿ ಮತ್ತು ಅದನ್ನು ಸ್ವಲ್ಪ ಕೂದಿಸಿ ಅದರಲ್ಲಿ ಅನ್ನವನ್ನು ಹಾಕಿ ನಂತರ ಅದಕ್ಕೆ ಲಿಂಬೆ ರಸವನ್ನು ಸೇರಿಸಿ.

ಹುಳಿ ಹುಳಿ ಹುಣಸೆಹಣ್ಣಿನ ಭಾತ್

Image
ಬೇಕಾಗುವ ಪದಾರ್ಥಗಳು ಬಾಸುಮತಿ ಅಕ್ಕಿ 2 ಕಪ್ ಹುಣಸೆಹಣ್ಣು 200 ಗ್ರಾಂ ಅಚ್ಚ ಖಾರದಪುಡಿ 4 ಚಮಚ ಒಣ ಮೆಣಸಿನಕಾಯಿ 6 ಬೆಲ್ಲ ನಿಂಬೆಹಣ್ಣು ಗಾತ್ರದಷ್ಟು ಕಡಲೆಬೀಜ 3 ಚಮಚ ಕರಿಬೇವು, ಸಾಸಿವೆ, ಉಪ್ಪು, ಎಣ್ಣೆ ತಯಾರಿಸುವ ವಿಧಾನ ಇದನ್ನು ತಯಾರಿಸುವಾಗ ಪೂರ್ತಿ ಬಾಸುಮತಿ ಅಕ್ಕಿ ಬೇಕಿಲ್ಲದಿದ್ದರೆ, ದಿನಬಳಸುವ ಸೋನಾ ಮಸೂರಿ ಅಕ್ಕಿ ತೆಗೆದುಕೊಂಡು ಸಣ್ಣ ಹಿಡಿಯಷ್ಟು ಬಾಸುಮತಿ ಅಕ್ಕಿಯನ್ನು ಅದಕ್ಕೆ ಬೆರೆಸಬಹುದು. ಮೊದಲಿಗೆ ಅಕ್ಕಿಯನ್ನು ಸುಮಾರು ಅರ್ಧಗಂಟೆ ಕಾಲ ನೀರಿನಲ್ಲಿ ನೆನೆಯಿಡಿ. ಹುಣಸೆಹಣ್ಣಿನಲ್ಲಿನ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಮಾಡಿ ಅದನ್ನೂ ನೀರಿನಲ್ಲಿ ನೆನೆಯಿಡಿ. ಒಂದು ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಚಟಪಟ ಅನ್ನಿಸಿ, ಅದಕ್ಕೆ ಒಣಮೆಣಸಿನಕಾಯಿ ಮತ್ತು ಕಡಲೆ ಬೀಜ ಹಾಕಿ ಚೆನ್ನಾಗಿ ತಾಳಿಸಿರಿ. ಒಗ್ಗರಣೆ ಹಾಕುವ ಕಾರ್ಯಕ್ಕೆ ಅಕ್ಕಿ ನೆನೆಸಿಟ್ಟು ಅರ್ಧ ಗಂಟೆ ನಂತರವೇ ಕೈಹಾಕಿದರೆ ಒಳಿತು. ಅಷ್ಟೊತ್ತಿಗೆ ಅಕ್ಕಿಯೂ ನೆಂದಿರುತ್ತದೆ ಮತ್ತು ಹುಣಸೆಹಣ್ಣಿನ ರಸವನ್ನೂ ತೆಗೆದಿಟ್ಟುಕೊಂಡಿರಬಹುದು. ಒಗ್ಗರಣೆಗೆ ತುಂಡು ಬೆಲ್ಲ, ಅಚ್ಚ ಖಾರದಪುಡಿ, ಹುಣಸೆರಸ ಎಲ್ಲ ಹಾಕಿ ಕಾಲು ಲೋಟ ನೀರು ಹಾಕಿ ಕುದಿಸಿರಿ. ಕುದಿಬಂದ ನಂತರ ಅದಕ್ಕೆ ನೆನೆಯಿಟ್ಟ ಅಕ್ಕಿಯನ್ನು ಹಾಕಿ ಬೇಯಿಸಿ. ಇವೆಲ್ಲವನ್ನು ಕುಕ್ಕಿರಿಗೆ ಸುರಿದುಕೊಂಡು ನಾಲ್ಕೈದು ವಿಷಲ್ ಹೊಡೆಸಿದ ನಂತರ ಇಳಿಸಿದರೆ ಉತ್ತಮ. ಬೇಕಿದ್ದರ...

ಈ ಚಿಕನ್ ಕರಿ ಸಕತ್ ಖಾರ- ಆದರೆ ದುಪ್ಪಟ್ಟು ಸ್ವಾದ

Image
ವಿಯೆಟ್ನಾಂ ಅಥವಾ ವಿಯೆಟ್ನಾಮೀಸ್ ಆಹಾರವೆಂದರೆ ಎಲ್ಲರ ಕಣ್ಣಲ್ಲಿ ನೀರು ಬರುತ್ತದೆ, ಏಕೆಂದರೆ ಅದು ಅಷ್ಟು ಖಾರವಾಗಿರುತ್ತದೆ ಎಂದರ್ಥ. ಆದರೆ ಕೆಲವೊಂದು ವಿಯೆಟ್ನಾಂನ ಆಹಾರಗಳು ಅಷ್ಟು ಖಾರವಾಗಿರುವುದಿಲ್ಲ. ಆದರೆ ಅಲ್ಲಿನ ಆಹಾರಗಳಲ್ಲಿ ಚೀನಾದ ಆಹಾರದ ಅನುಕರಣೆ ಸಹಜವಾಗಿ ಕಾಣಸಿಗುವುದು. ವಿಯೆಟ್ನಾಂನ ಹೆಚ್ಚಿನ ಆಹಾರಗಳಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗುತ್ತದೆ. ವಿಯೆಟ್ನಾಂನ ಆಹಾರಗಳಲ್ಲಿ ಹೆಚ್ಚಾಗಿ ಮೀನಿನ ಸಾಸ್ ನ್ನು ಕೋಳಿ, ಹಂದಿ, ಬೀಫ್, ತರಕಾರಿ ಹಾಗೂ ಮೀನಿನ ಪದಾರ್ಥಗಳಲ್ಲಿ ಬಳಸಲಾಗುತ್ತದೆ.  ಮೀನಿನ ಸಾಸ್ ನ್ನು ಹೆಚ್ಚಾಗಿ ಆಹಾರಗಳಿಗೆ ಉಪ್ಪಿನಅಂಶ ಬರಲು ಉಪಯೋಗಿಸುತ್ತಾರೆ. ಇಲ್ಲಿ ತಿಳಿಸಲಾಗಿರುವ ವಿಯೆಟ್ನಾಂನ ಎರಡು ಪದಾರ್ಥಗಳನ್ನು ಹೇಗೆ ತಯಾರಿಸಬಹುದು ಮತ್ತು ಅದು ಎಷ್ಟು ಸುಲಭ ಎಂದು ತಿಳಿದುಕೊಳ್ಳಿ. ನಾಲ್ಕು ಜನರಿಗೆ ಬಡಿಸಲು ಈ ಪದಾರ್ಥಗಳನ್ನು ಮಾಡಬಹುದು ಮತ್ತು ಅನ್ನಕ್ಕೆ ಇದು ತುಂಬಾ ರುಚಿಯಾಗಿರುತ್ತದೆ. ಬನ್ನಿ ಇದನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ನೋಡೋಣ..   ಆಂಧ್ರ ಶೈಲಿಯಲ್ಲಿ ಬೊಂಬಾಟ್ ಚಿಕನ್ ಕರಿ ರೆಸಿಪಿ  ಬೇಕಾಗುವ ಸಾಮಗ್ರಿಗಳು  *ಚರ್ಮ ತೆಗೆದಿರುವ ಒಂದು ಇಡೀ ಕೋಳಿ. ಎರಡು ಎಸಲು ಬೆಳ್ಳುಳ್ಳಿ.  *ಒಂದು ಚಮಚ ಕ್ಯಾನೊಲಾ ಎಣ್ಣೆ  *ಒಂದು ಚಮಚ ಸಕ್ಕರೆ  *ಒಂದು ಚಮಚ ಮೀನಿನ ಸಾಸ್  *½ ಚಮಚ ಕಡಿಮೆ ಉಪ್ಪಿನಾಂಶವಿರುವ ಸ...

ಮಸಾಲ್ ಪುರಿ ಮಾಡುವುದು ಹೇಗೆ ಗೊತ್ತಾ?

Image
ಬೆಂಗಳೂರು: ರೋಡ್ ಸೈಡ್ ಸಿಗುವ ಮಸಾಲ್ ಪುರಿ ಎಷ್ಟು ಇಷ್ಟಪಟ್ಟು ತಿನ್ನುತ್ತೇವೆ. ಅದನ್ನು ತಿಂದರೆ ಹೊಟ್ಟೆ ಹಾಳಾಗುತ್ತದೆ ಎಂದು ಕೊರಗುವವರಿಗೆ ಇಲ್ಲಿದೆ ರೆಸಿಪಿ. ಬೇಕಾಗುವ ಸಾಮಗ್ರಿಗಳು ಕಾಯಿ ತುರಿ ಕಾಳು ಮೆಣಸು ಕೆಂಪು ಮೆಣಸು ಜೀರಿಗೆ ಧನಿಯಾ ಚಕ್ಕೆ ಲವಂಗ ಜಾಯಿಕಾಯಿ ಆಲೂಗಡ್ಡೆ ತೊಗರಿ ಬೇಳೆ ಟೊಮೆಟೋ ಈರುಳ್ಳಿ ಸೇಮಿಗೆ ಬಿಳಿ ಬಟಾಣಿ ಗೋಧಿ ಹುಡಿ ಕೊತ್ತಂಬರಿ ಸೊಪ್ಪು ಮಾಡುವ ವಿಧಾನ: ಬಿಳಿ ಬಟಾಣಿ ಕಾಳನ್ನು 2 ಗಂಟೆ ಕಾಲ ನೆನೆ ಹಾಕಿ. ಗೋಧಿ ಹುಡಿ ಚಪಾತಿ ಹದಕ್ಕೆ ಕಲಸಿಕೊಂಡು ತುಕ್ಕುಡಿ ತಯಾರಿಸಿಕೊಳ್ಳಿ. ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆ, ಆಲೂಗಡ್ಡೆ ಮತ್ತು ಬಟಾಣಿ ಕಾಳನ್ನು ಬೇಯಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಜೀರಿಗೆ, ಒಂದು ಕೆಂಪು ಮೆಣಸು, ಧನಿಯಾ ಕಾಳು, ಲವಂಗ, ಕಾಳು ಮೆಣಸು, ಚಕ್ಕೆ, ಜಾಯಿ ಕಾಯಿ ಎಣ್ಣೆ ಹಾಕದೆ ಹುರಿದು ಪ್ರತ್ಯೇಕವಾಗಿಟ್ಟುಕೊಳ್ಳಿ. ನಂತರ ಸ್ವಲ್ಪವೇ ಕಾಯಿತುರಿಯನ್ನೂ ಹುರಿದಿಟ್ಟುಕೊಳ್ಳಿ. ಹುರಿದ ವಸ್ತುಗಳನ್ನು ಬೇಯಿಸಿಕೊಂಡ ಆಲೂಗಡ್ಡೆ, ತೊಗರಿಬೇಳೆ ಹಾಗೂ ಟೊಮೆಟೋ, ಈರುಳ್ಳಿ ಜತೆ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಉಪ್ಪು, ಬೇಯಿಸಿದ ಬಟಾಣಿ ಹಾಕಿ ಚೆನ್ನಾಗಿ ಕುದಿಸಿದರೆ ಮಸಾಲೆ ರೆಡಿ. ನಂತರ ಒಂದು ತಟ್ಟೆಯಲ್ಲಿ ಮೊದಲೇ ಮಾಡಿಟ್ಟುಕೊಂಡ ತುಕ್ಕುಡಿ ಪುಡಿಮಾಡಿ ಅದರ ಮೇಲೆ ಮಸಾಲೆ ಹಾಕಿಕೊಳ್ಳಿ. ಇದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ, ಸೇಮಿಗೆ, ಕೊತ್ತಂ...

ಕೀಮಾ ಬುರ್ಜಿ

Image
ಬೇಕಾಗುವ ಸಾಮಾಗ್ರಿಗಳು: ಮಾಂಸದ ಚೂರುಗಳು - ಕಾಲು ಕೆಜಿ ಎಣ್ಣೆ - 2 ಚಮಚ ತುಂಡುಮಾಡಿದ ಕೆಂಪುಮೆಣಸಿನಕಾಯಿ - 1 ಹಿಡಿ ದೊಡ್ಡ ಈರುಳ್ಳಿ - 1 ಹಸಿಮೆಣಸಿನಕಾಯಿ - 2 ಮೆಣಸಿನಪುಡಿ - ಕಾಲು ಚಮಚ ಟೊಮ್ಯಾಟೋ - 1 ಅರಸಿನ ಹುಡಿ - ಅರ್ಧ ಚಮಚ ಉಪ್ಪು - 2 ಚಮಚ ಕಟಿದ ಹಸಿಮೊಟ್ಟೆ - 1 ಪುಡಿಮಾಡಿದ ಫೆನೆಲ್ ಬೀಜಗಳು - 1 ಪಾಕ ವಿಧಾನ: ಮೊದಲಿಗೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಟೊಮ್ಯಾಟೋವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಕಾಯಿಸಿ, ಕೆಂಪು ಮೆಣಸಿನಕಾಯಿ ತುಂಡುಗಳನ್ನು ಸೇರಿಸಿ. ಇದಕ್ಕೆ ಟೊಮ್ಯಾಟೋ, ಈರುಳ್ಳಿ, ಹಸಿಮೆಣಸಿನಕಾಯಿ ತುಂಡುಗಳನ್ನು ಸೇರಿಸಿ ಹುರಿಯಿರಿ. ಹುರಿದ ನಂತರ ಮಾಂಸದ ಚೂರುಗಳು, ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ 5 ನಿಮಿಷ ಬೇಯಿಸಿ. ನಂತರ ಹಸಿ ಮೊಟ್ಟೆ ಸೇರಿಸಿ ಬೇಯುವವರೆಗೂ ಲೋಳೆಯನ್ನು ಬೇಯಿಸಿ. ಕೊನೆಯಲ್ಲಿ ಫೆನೆಲ್ ಬೀಜ ಸೇರಿಸಿ 1 ನಿಮಿಷ ಕಾಲ ಚೆನ್ನಾಗಿ ಕಲಸಿ.ಇದನ್ನು ಅನ್ನ ಅಥವಾ ರೊಟ್ಟಿಗಳೊಡನೆ ಜೊತೆ ತಿನಿಸಾಗಿ ಬಡಿಸಬಹುದು.

ಬೆಂಡೆಕಾಯಿ ರಾಯತ

Image
ಬೇಕಾಗುವ  ಸಾಮಗ್ರಿಗಳು ಬೆಂಡೆಕಾಯಿ -  1\4 ಕೆ ಜಿ ಹಸಿಮೆಣಸಿನಕಾಯಿ - 3 ರಿಂದ 4 ಕೊತ್ತಂಬರಿ - 1\4 ಬಟ್ಟಲು ಉಪ್ಪು - ರುಚಿಗೆ ತಕ್ಕಷ್ಟು ಎಣ್ಣೆ - 1ಚಮಚ ಮೊಸರು - 1ಬಟ್ಟಲು ಈರುಳ್ಳಿ - 4 ಪಾಕ ವಿಧಾನ: ಮೊದಲು ಬೆಂಡೆಕಾಯಿಯನ್ನು ಸ್ವಚ್ಚಗೊಳಿಸಿ ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ.ಕಾದ ಮೇಲೆ ಅದಕ್ಕೆ ಬೆಂಡೆಕಾಯಿ, ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ,  ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಹಾಕಿ ಚೆನ್ನಾಗಿ ಕಿವುಚಿರಿ. ಕೊನೆಯಲ್ಲಿ  ಸಾಸಿವೆ ಕರಿಬೇವು ಒಗ್ಗರಣೆ ಹಾಕಿರಿ.  

ಪಟಾ ಪಟ್ ಚಿಕನ್ ಮಂಚೂರಿ

Image
ಚಳಿಗಾಲ ಬೇರೆ ಶುರುವಾಗಿದೆ.. ತಂಡಿ ಚಳಿಗೆ ಬಾಯಿಗೆ ರುಚಿ ನೀಡುವ ಖಾದ್ಯಗಳಲ್ಲಿ ಚಿಕನ್ ಐಟಮ್ಗಳು ತುಂಬಾ ಬರ್ತವೆ.. ಅದ್ರಲ್ಲಿ ಸ್ವಲ್ಪ ಸ್ಪೈಸಿ.. ಸ್ವಲ್ಪ ಸ್ವೀಟ್ ಆಗಿರೋ ಚಿಕನ್ ಮಂಚೂರಿ ಸವಿಯೋದೆ ಒಂದು ಮಜಾ.. ಮತ್ತಿನ್ಯಾಕೆ ತಡ ಚಿಕನ್ ಮಂಚೂರಿ ಮಾಡೋದ್ಹೇಗೆ ಅಂತಾ ಹೇಳ್ತೀವಿ ಬನ್ನಿ. ಬೇಕಾಗುವ ಸಾಮಗ್ರಿಗಳು ಚಿಕನ್(ಮಿಡಿಯಮ್ ಸೈಜ್ ಇರಲಿ), ಎರಡು ಮೊಟ್ಟೆ, ಕಬಾಬ್ ಪೌಡರ್, ಕಿಸಾನ್ ಜಾಮ್, ಸ್ವಲ್ಪ ಖಾರದ ಪುಡಿ, ಪೆಪ್ಪರ್ ಪೌಡರ್, ಹಸಿ ಮೆಣಸಿನ ಪೇಸ್ಟ್ ಒಂದು ಟೀ ಸ್ಫೂನ್, ಸ್ವಲ್ಪ ಎಣ್ಣೆ. ಈರುಳ್ಳಿ, ಕತ್ತರಿಸಿದ ಹಸಿ ಮೆಣಸಿನಕಾಯಿ. ಮಾಡುವ ವಿಧಾನ ಮೊದಲು ಚಿಕನ್ನನ್ನು ಮಿಡಿಯಮ್ ಸೈಜ್ನಲ್ಲಿ ಕಟ್ ಮಾಡಿಟ್ಟುಕೊಳ್ಳಿ. ಅದಕ್ಕೆ ಕಬಾಬ್ ಪೌಡರ್, ಎರಡು ಮೊಟ್ಟೆ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಖಾರದ ಪುಡಿ, ಹಸಿ ಮೆಣಸಿನ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 15 ನಿಮಿಷ ನೆನೆಯಲು ಬಿಡಿ. ನಂತರ ಕಾದ ಎಣ್ಣೆಯಲ್ಲಿ ಚಿಕನ್ ತುಣುಕುಗಳನ್ನು ಬಿಡಿ. ಚಿಕನ್ ಕಬಾಬ್ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಬಾಣಲೆಯಿಂದ ಕಬಾಬ್ ತೆಗೆಯಿರಿ. ನಂತರ ಬೇರೆ ಪಾತ್ರೆಗೆ  1 ಟೇಬಲ್ ಸ್ಪೂನ್ ಎಣ್ಣೆ ಹಾಕಿ.. ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಗೂ ಮೆಣಸಿನಕಾಯಿ ಹಾಕಿ ಪ್ರೈ ಮಾಡಿ. ನಂತರ ಕಬಾಬ್ ಪೀಸ್ ಹಾಕಿ ಮಿಶ್ರಣ ಮಾಡಿ.. ಇದಾದ ಬಳಿಕ ಸಾಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ. ಚಿಕನ್ ಮಂಚೂರಿ ಸವಿಯಲು ಸಿದ್ಧ.

ಟೊಮೆಟೊ ತೊಕ್ಕು ಮಾಡಿ ವಿಟಮಿನ್ ಹೊಟ್ಟೆಗಿಳಿಸಿ

Image
ಬೆಂಗಳೂರು: ಟೊಮೆಟೊ ಉಪ್ಪಿನಕಾಯಿ ರೀತಿಯಲ್ಲೇ ತೊಕ್ಕು ಮಾಡಬಹುದು. ಸಿ ವಿಟಮಿನ್ ಹೇರಳವಾಗಿರುವ ಟೊಮೆಟೋ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಹದ ಖಾರ, ಉಪ್ಪು ಹಾಕಿಕೊಂಡು ಮಾಡುವುದರಿಂದ ಹೊಟ್ಟೆಯುರಿ ಬಾರದ ಹಾಗೆ ಊಟ ರುಚಿಯಾಗುವಂತೆ ಮಾಡುವ ರೆಸಿಪಿ ಇದು. ಮಾಡುವುದು ಹೇಗೆಂದು ನೋಡಿಕೊಳ್ಳಿ. ಬೇಕಾಗುವ ಸಾಮಗ್ರಿಗಳು ಟೊಮೆಟೊ ಸಾಸಿವೆ ಇಂಗು ಎಣ್ಣೆ ಉಪ್ಪು ಅರಸಿನ ಪುಡಿ ಖಾರದ ಪುಡಿ ಮಾಡುವ ವಿಧಾನ ಟೊಮೆಟೋವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆ, ಇಂಗು, ಎಣ್ಣೆ ಹಾಕಿಕೊಂಡು ಒಗ್ಗರಣೆ ಮಾಡಿದ ಮೇಲೆ ಕತ್ತರಿಸಿದ ಟೊಮೆಟೋವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಸ್ವಲ್ಪ ಅರಸಿನ ಪುಡಿ, ಖಾರದ ಪುಡಿ, ಉಪ್ಪು ಹಾಕಿಕೊಂಡು ಚೆನ್ನಾಗಿ ತಿರುವಿ. ನೀರು ಹಾಕುವುದು ಬೇಡ. ಟೊಮೆಟೊ ಚೆನ್ನಾಗಿ ಬೆಂದು ಮುದ್ದೆಯಾಗಿ ಉರಿ ಆರಿಸಿ. ಇದನ್ನು ಎರಡು ಮೂರು ದಿನದವರೆಗೆ ಹಾಳಾಗದಂತೆ ಇಡಬಹುದು. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ