ಬೆಂಡೆಕಾಯಿ ರಾಯತ

ಬೇಕಾಗುವ  ಸಾಮಗ್ರಿಗಳು


ಬೆಂಡೆಕಾಯಿ -  1\4 ಕೆ ಜಿ
ಹಸಿಮೆಣಸಿನಕಾಯಿ - 3 ರಿಂದ 4
ಕೊತ್ತಂಬರಿ - 1\4 ಬಟ್ಟಲು
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 1ಚಮಚ
ಮೊಸರು - 1ಬಟ್ಟಲು
ಈರುಳ್ಳಿ - 4

ಪಾಕ ವಿಧಾನ:


ಮೊದಲು ಬೆಂಡೆಕಾಯಿಯನ್ನು ಸ್ವಚ್ಚಗೊಳಿಸಿ ಸಣ್ಣದಾಗಿ ಹೆಚ್ಚಿಕೊಳ್ಳಿ.

ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ.ಕಾದ ಮೇಲೆ ಅದಕ್ಕೆ ಬೆಂಡೆಕಾಯಿ, ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ,  ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಹಾಕಿ ಚೆನ್ನಾಗಿ ಕಿವುಚಿರಿ.

ಕೊನೆಯಲ್ಲಿ  ಸಾಸಿವೆ ಕರಿಬೇವು ಒಗ್ಗರಣೆ ಹಾಕಿರಿ.  

Comments

Popular posts from this blog

ಹುಳಿ ಹುಳಿ ಹುಣಸೆಹಣ್ಣಿನ ಭಾತ್

ವಿಶೇಷ ಬೆಂಗಾಲಿ ರೆಸಿಪಿ ಫಿಶ್ ಕಬಿರಾಜಿ ಕಟ್ಲೇಟ್

ಪಟಾ ಪಟ್ ಚಿಕನ್ ಮಂಚೂರಿ