ಅಸದಳ ರುಚಿಯನ್ನು ನೀಡುವ ಬೇಬಿ ಕಾರ್ನ್ ಗೋಡಂಬಿ ಗ್ರೇವಿ

ಯಾವಾಗಲೂ ಒಂದೇ ಬಗೆಯ ಸ್ವಾದವನ್ನು ಸವಿಯುವುದೆಂದರೆ ಯಾವಾಗಲೂ ಅದು ಬೇಸರವೇ. ಅದಕ್ಕಿಂತ ಬೇರೆಯಾಗಿರುವ ನಿಮ್ಮ ರುಚಿಯ ಪ್ರಮಾಣವನ್ನು ದುಪ್ಪಟ್ಟಾಗಿಸುವ ವಿಶೇಷ ಖಾದ್ಯವನ್ನು ಈ ಲೇಖನದಲ್ಲಿ ನಾವು ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮ ನಾಲಿಗೆಯ ರುಚಿಯನ್ನು ತಣಿಸುವ ಈ ಬೇಬಿ ಕಾರ್ನ್ ಗೋಡಂಬಿ ಖಾದ್ಯ ಹೆಸರಿಗೆ ತಕ್ಕಂತೆ ಹಿತಮಿತವಾಗಿದೆ. ತಯಾರಿಸಲು ಅತ್ಯಂತ ಸುಲಭ ಮತ್ತು ರುಚಿಯಲ್ಲಿ ಅಸದಳ ಸ್ವಾದವನ್ನು ದುಪ್ಪಟ್ಟಾಗಿಸುವ ಈ ಖಾದ್ಯ ನಿಜಕ್ಕೂ ವಿಶೇಷವಾಗಿದೆ.

ಇಂದಿನ ಲೇಖನದಲ್ಲಿ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಬೇಬಿ ಕಾರ್ನ್ ಗೋಡಂಬಿ ರೆಸಿಪಿಯನ್ನು ಇಲ್ಲಿ ನೀಡುತ್ತಿದ್ದೇವೆ. ದಸರಾ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಈ ಬೇಬಿ ಕಾರ್ನ್ ಗೋಡಂಬಿ ಖಾದ್ಯ ನಿಮ್ಮಲ್ಲಿ ತಿನ್ನುವ ಉತ್ಕಟತೆಯನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. 
ಬೆಬಿ ಕಾರ್ನ್ ಮತ್ತು ಗೋಡಂಬಿಯೊಂದಿಗೆ ಇತರ ಮಸಾಲಾ ಸಾಮಾಗ್ರಿಗಳಾದ ಪಿಸ್ತಾ ಬಾದಾಮಿ ಜೊತೆಯಾಗಿ ಕೂಡಿಕೊಂಡು ಈ ಅದ್ಭುತ ಸವಿಯನ್ನು ನಿಮ್ಮ ಬಾಯಲ್ಲಿ ಉಳಿಯುವಂತೆ ಮಾಡುತ್ತದೆ. ಚಪಾತಿ, ಪೂರಿಯೊಂದಿಗೆ ಸವಿಯಬಹುದಾದ ಈ ರುಚಿಕರ ಬೇಬಿ ಕಾರ್ನ್ ಗ್ರೇವಿ ನಿಮ್ಮಲ್ಲಿ ಸವಿಯ ಮಜವನ್ನು ಹೆಚ್ಚಿಸುವುದು ಖಂಡಿತ.

ಪ್ರಮಾಣ: 4 
*ಸಿದ್ಧತಾ ಸಮಯ: 1/2 ಗಂಟೆ
*ಅಡುಗೆಗೆ ಬೇಕಾದ ಸಮಯ: 1/2 ಗಂಟೆ 


ಸಾಮಾಗ್ರಿಗಳು: 

*ಬೇಬಿಕಾರ್ನ್ - 10 
*ಈರುಳ್ಳಿ - 2 
*ಬೆಳ್ಳುಳ್ಳಿ - ಸ್ವಲ್ಪ
 *ಗೋಡಂಬಿ - 8 
*ಮೆಣಸಿನ ಹುಡಿ - ರುಚಿಗೆ ತಕ್ಕಷ್ಟು 
*ಉಪ್ಪು - ರುಚಿಗೆ ತಕ್ಕಷ್ಟು 
*ಜೀರಿಗೆ - ಸ್ವಲ್ಪ 
*ಕೊತ್ತಂಬರಿ ಸೊಪ್ಪು - ಸ್ವಲ್ಪ
 *ಎಣ್ಣೆ - 50 ಗ್ರಾಮ್
*ಶುಂಠಿ - 1 ತುಂಡು
 *ಬಾದಾಮಿ - 10
 *ಪಿಸ್ತಾ - 10 
*ಧನಿಯಾ - ರುಚಿಗೆ ತಕ್ಕಷ್ಟು
 *ಅರಿಶಿನ - ಚಿಟಿಕೆಯಷ್ಟು


 ಮಾಡುವ ವಿಧಾನ 

*ಬೇಬಿ ಕಾರ್ನ್ ಎಳೆಯದಾಗಿದ್ದು ಮೊದಲಿಗೆ ಇವುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ.
 *ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದೊಡನೆ, ಬೇಬಿ ಕಾರ್ನ್ ತುಂಡುಗಳನ್ನು ಹಾಕಿ ಕರಿಯಿರಿ. ಈ ಕರಿದ ತುಂಡುಗಳನ್ನು ಪ್ರತ್ಯೇಕವಾಗಿ ತೆಗೆದಿಡಿ. 
*ಉಳಿದ ಎಣ್ಣೆಗೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಶುಂಠಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಿ. 
*ರುಚಿಗೆ ಬೇಕಾದಷ್ಟು ಹಸಿರು ಮೆಣಸಿನ ಕಾಯಿಯನ್ನು ಉದ್ದಕೆ ಸೀಳಿ ಸೇರಿಸಿ. ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ. 
*ಈಗ ಸಮಪ್ರಮಾಣದಲ್ಲಿ ಬಾದಾಮಿ, ಪಿಸ್ತಾ, ಗೋಡಂಬಿಯನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಇವುಗಳನ್ನು ನುಣ್ಣಗೆ ಪೇಸ್ಟ್‌ನಂತೆ ತಯಾರಿಸಿಕೊಳ್ಳಿ. ನಂತರ ಗ್ಯಾಸ್ ಮೇಲಿರುವ ಗ್ರೇವಿಗೆ ಈ ಪೇಸ್ಟ್ ಅನ್ನು ಸೇರಿಸಿ. 
*ಅರಶಿನ, ಧನಿಯಾ ಮತ್ತು ಜೀರಿಗೆ ಪುಡಿಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ. 
*ಇದಾದ ನಂತರ ಈಗಾಗಲೇ ಹುರಿದಿಟ್ಟಿರುವ ಬೇಬಿ ಕಾರ್ನ್ ತುಂಡುಗಳನ್ನು ಇದಕ್ಕೆ ಸೇರಿಸಿ ನಾಲ್ಕು ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
 *ನೀರು ಸೇರಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣವನ್ನು ಚೆನ್ನಾಗಿ ಕುದಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಗ್ರೇವಿಗೆ ಸೇರಿಸಿಕೊಳ್ಳಿ. ನಿಮ್ಮ ಬೇಬಿ ಕಾರ್ನ್ ಗೋಡಂಬಿ ಗ್ರೇವಿ ಕರಿ ಖಾದ್ಯ ಸವಿಯಲು ಸಿದ್ಧವಾಗಿದೆ. ಫ್ರೈಡ್ ರೈಸ್, ಚಪಾತಿ ಪೂರಿಯೊಂದಿಗೆ ಈ ಗ್ರೇವಿಯನ್ನು ನಿಮಗೆ ಸೇವಿಸಬಹುದು.

Comments

Popular posts from this blog

ಹುಳಿ ಹುಳಿ ಹುಣಸೆಹಣ್ಣಿನ ಭಾತ್

ವಿಶೇಷ ಬೆಂಗಾಲಿ ರೆಸಿಪಿ ಫಿಶ್ ಕಬಿರಾಜಿ ಕಟ್ಲೇಟ್

ಪಟಾ ಪಟ್ ಚಿಕನ್ ಮಂಚೂರಿ