Posts

ಈ ರೀತಿಯೆಲ್ಲಿ ಚಿಕನ್ ಅಡುಗೆ ಟ್ರೈ ಮಾಡಿ ನೋಡಿ

Image
ಪ್ರತೀಬಾರಿ ಚಿಕನ್ ಅಡುಗೆ ಮಾಡುವಾಗ ಒಂದೇ ರುಚಿಯಲ್ಲಿ ಮಾಡಿ ಬೋರಾಗಿದೆಯೇ? ಹಾಗಾದರೆ ಈ ಕೂಲ್ ಸೌತೆಕಾಯಿ ಚಿಕನ್ ಅಡುಗೆ ಟ್ರೈ ಮಾಡಬಾರದೇಕೆ? ಚಿಕನ್ ಅಡುಗೆಗೆ ಸೌತೆಕಾಯಿ ಸೇರಿಸಿದರೆ ವಿಶಿಷ್ಟವಾದ ಸ್ವಾದ ಹೊಂದಿರುತ್ತದೆ. ಈ ಸ್ಪೆಷಲ್ ಚಿಕನ್ ಅಡುಗೆ ಸೂಪರ್ ಟೇಸ್ಟ್ ಹೊಂದಿದ್ದು, ಇದನ್ನು ಮಾಡುವ ವಿಧಾನವನ್ನು ಇಲ್ಲಿ ಹೇಳಿದ್ದೇವೆ ನೋಡಿ:    ಬೇಕಾಗುವ ಸಾಮಾಗ್ರಿಗಳು  ಚಿಕನ್ 1 ಕೆಜಿ ಆಲೂಗಡ್ಡೆ 2(ಸಿಪ್ಪೆ ಸುಲಿದು ಚೌಕಾಕಾರದಲ್ಲಿ ಕತ್ತರಿಸಿದ್ದು)  ಸೌತೆಕಾಯಿ 1-2(ದೊಡ್ಡದಾತ್ರದ ಸೌತೆಕಾಯಿ ಆದರೆ 1 ಸಾಕು)  ಮೊಸರು 1 ಕಪ್  ಈರುಳ್ಳಿ2  ಟೊಮೆಟೊ 1  ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ  3-4 ಎಸಳು ಬೆಳ್ಳುಳ್ಳಿ  ರುಚಿಗೆ ತಕ್ಕ ಉಪ್ಪು  ಏಲಕ್ಕಿ2  ಒಂದೂವರೆ ಇಂಚಿನಷ್ಟು ದೊಡ್ಡದಿರುವ ಚಕ್ಕೆ ( ಪುಡಿ ಮಾಡಿದ್ದು)  ಕ್ಯಾಪ್ಸಿಕಂ1  ಟೊಮೆಟೊ 1 ಅರಿಶಿಣ ಪುಡಿ -ಅರ್ಧ ಚಮಚ ಮಿಕ್ಸ್ ಮಾಡಲು,  ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು  ಖಾರದ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು  ಕೊತ್ತಂಬರಿ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು,  ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು  ಜೀರಿಗೆ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು,  ಮತ್ತೆ ಅರ್ಧ ...

ಅಸದಳ ರುಚಿಯನ್ನು ನೀಡುವ ಪನ್ನೀರ್-ರಾಜ್ಮಾ ಕರಿ ರೆಸಿಪಿ

Image
ಪನ್ನೀರ್ ಮತ್ತು ರಾಜ್ಮ ಎರಡೂ ಉತ್ತರ ಭಾರತದ ಪದಾರ್ಥಗಳಾಗಿ ಜನರಿಗೆ ಪರಿಚಿತವಾಗಿವೆ. ಇವುಗಳ ಹೆಸರು ಹೇಳಿದರೆ ಸಾಕು, ಜನರಿಗೆ ಬಾಯಿಯಲ್ಲಿ ನೀರೂರುತ್ತದೆ. ಅವುಗಳ ರುಚಿಯೇ ಹಾಗೆ. ಹಾಗಾಗಿ ಇವುಗಳ ಸಹಾಯದಿಂದ ಒಂದು ತಿಂಡಿಯನ್ನು ಮಾಡಿದರೆ ಅವುಗಳ ರುಚಿಯನ್ನು ನೀವೇ ಊಹಿಸಬಹುದು. ಇದರ ರುಚಿಯು ನಿಮ್ಮ ರುಚಿಗ್ರಂಥಿಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಇದನ್ನು ತಯಾರಿಸಲು ನೀವು ರಾಜ್ಮಾವನ್ನು ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು. ಆಗ ರಾಜ್ಮಾವನ್ನು ಬೇಯಿಸಿದಾಗ ಅದು ಮೆತ್ತಗಾಗಲು ಇದು ಅತ್ಯಾವಶ್ಯಕ. ರಾಜ್ಮಾವನ್ನು ಬೇಯಿಸುವಾಗ ಸ್ವಲ್ಪ ಉಪ್ಪು ಮತ್ತು ಮೆಣಸಿನಕಾಯಿಯನ್ನು ಹಾಕಿ. ಇದರಿಂದ ಅದರ ರುಚಿ ದ್ವಿಗುಣವಾಗುತ್ತದೆ. ಮತ್ತೊಂದು ವಿಶೇಷವೆಂದರೆ, ಈ ಪದಾರ್ಥಗಳು ನಿಮ್ಮ ಅಡುಗೆ ಮನೆಯಲ್ಲಿಯೇ ದೊರೆಯುತ್ತವೆ. ಇದಕ್ಕೆ ಬಳಸುವ ಕೆಲವೊಂದು ಮಸಾಲೆಗಳು ನಿಮ್ಮ ಬಾಯಿಯಲ್ಲಿ ನೀರೂರುವಂತೆ ಮಾಡುತ್ತವೆ. ಬನ್ನಿ ಈ ಮಧ್ಯಾಹ್ನ ಈ ರಾಜ್ಮಾ ಕರಿಯನ್ನು ಮಾಡುವ ಬಗೆಯನ್ನು ತಿಳಿದುಕೊಂಡು ಬರೋಣ. ನಾಲ್ಕು ಜನರಿಗೆ ಬಡಿಸಬಹುದು ತಯಾರಿಕೆಗೆ ತಗುಲುವ ಸಮಯ: 19 ನಿಮಿಷಗಳು ಅಡುಗೆಗೆ ತಗುಲುವ ಸಮಯ : 40 ನಿಮಿಷಗಳು ಅಗತ್ಯವಾದ ಪದಾರ್ಥಗಳು  *ರಾಜ್ಮಾ - 1 1/2 ಕಪ್ *ಪನ್ನೀರ್ - 150 ಗ್ರಾಂ *ಈರುಳ್ಳಿ - 2 (ಕತ್ತರಿಸಿದಂತಹುದು)  *ಟೊಮೇಟೊ - 2 (ಕತ್ತರಿಸಿದಂತಹುದು) *ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೀ.ಚಮಚ  *ಅರಿಶಿನ ಪುಡಿ- ...

ಕ್ಯಾರೆಟ್ ರೈಸ್ ಬಾತ್-ಸಕತ್ ರುಚಿ ಕಣ್ರೀ!

Image
ಬೆಳಗಿನ ತಿಂಡಿ ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಹೌದು ಬೆಳಗಿನ ಜಾವದ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಕಾಯವನ್ನು ನಾವು ಪಡೆಯುತ್ತೇವೆ ಎಂಬುದು ವಾಸ್ತವ ಸತ್ಯ.  ಬೆಳಗಿನ ಬ್ರೇಕ್‌ಫಾಸ್ಟ್ ರುಚಿಕಟ್ಟಾಗಿ ಅಚ್ಚುಕಟ್ಟಾಗಿ ಇದ್ದಷ್ಟು ಅದನ್ನು ಸೇವಿಸುವ ಮನಸ್ಸು ತೃಪ್ತಿ ಹೊಂದುತ್ತದೆ, ಮತ್ತು ದೇಹ ಕೂಡ ಆರೋಗ್ಯಯುತ ಆಹಾರ ಪದ್ಧತಿಯಿಂದಾಗಿ ಉಲ್ಲಾಸದಿಂದ ಕೂಡಿರುತ್ತದೆ. ಆದ್ದರಿಂದಲೇ ನಿಮ್ಮ ಮೈ ಮನ ಬಯಸುವ ಆಹಾರ ವಿಧಾನವನ್ನೇ ದೈನಂದಿನ ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಇಂದು ನಿಮ್ಮ ದೇಹಕ್ಕೆ ಆರೋಗ್ಯಕಾರಿಯಾಗಿರುವ ಸೊಗಸಾದ ಖಾದ್ಯದೊಂದಿಗೆ ಬಂದಿರುವೆವು ಅದುವೇ ಕ್ಯಾರೆಟ್ ರೈಸ್ ಬಾತ್.  ಹೌದು, ಸಮೃದ್ಧ ಪೋಷಕಾಂಶಗಳ ಆಗರವಾಗಿರುವ ಕ್ಯಾರೇಟ್‌ನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಅತಿ ಕಡಿಮೆ ಇರುವುದರಿಂದ ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದರ ಜೊತೆಗೆ ಹೃದ್ರೋಗವನ್ನು ನಿಯಂತ್ರಿಸುತ್ತದೆ. ಹಾಗಿದ್ದರೆ ತಡ ಯಾಕೆ? ತಯಾರಿಕೆ ವಿಧಾನ ತಿಳಿಸಲು ನಾವು ರೆಡಿ. ಮಾಡಲು ನೀವು ರೆಡಿನಾ..? *ಪ್ರಮಾಣ: 4 ಜನರಿಗೆ ಬಡಿಸಬಹುದು  *ಸಿದ್ಧತೆಗೆ ತಗುಲುವ ಸಮಯ: 10 ನಿಮಿಷ  *ಅಡುಗೆಗೆ ತಗ...

ರುಚಿಯಾದ ಕೇರಳ ಫಿಶ್ ಕರಿ ಮೀನ್ ಮೌಲಿ!

Image
ಕೇರಳದ ತೀರಗಳಲ್ಲಿ ಮೀನ್ ಮೌಲಿ ಅಥವಾ ಫಿಶ್ ಕರಿ ತುಂಬಾ ಹೆಸರುವಾಸಿ. ಇಲ್ಲಿ ಮೀನ್ ಎಂದರೆ ಮೀನು ಮತ್ತು ಕರಿ ಅಂದರೆ ಪದಾರ್ಥವಾಗಿದೆ. ತೆಂಗಿನ ಕಾಯಿಯನ್ನು ಬಳಸಿ ಈ ಯಮ್ಮೀ ಮೀನು ಕರಿಯನ್ನು ತಯಾರಿಸಲಾಗುತ್ತದೆ. ಇದು ತುಂಬಾ ಟೇಸ್ಟಿಯಾಗಿದ್ದು ಖಂಡಿತ ನಿಮಗೆ ಮೀನು ಕರಿಯ ಸ್ವಾದವನ್ನು ಉಣಬಡಿಸುತ್ತದೆ.  ಈ ಮೀನು ಕರಿಗೆ ನೀವು ಬಳಸಬೇಕಾಗಿರುವ ಸೋಲೆ ಅಥವಾ ಕಿಂಗ್‌ಫಿಶ್ ಆಗಿದೆ. ಎಲ್ಲಾ ಮೀನು ಪ್ರಿಯರಿಗೆ ಈ ಫಿಶ್ ಕರಿ ಒಳ್ಳೆಯ ರಸದೌತಣವಾಗಲಿದೆ. ಈ ಮೀನು ಕರಿ ಬೇರೆ ಮೀನು ಪದಾರ್ಥಕ್ಕಿಂತ ಭಿನ್ನವಾಗಿದ್ದು ನಿಮ್ಮ ಬಾಯಿ ರುಚಿಯನ್ನು ತಣಿಸುತ್ತದೆ. ಹಾಗಿದ್ದರೆ ಈ ಸೊಗಸಾದ ಮೀನು ಮೌಲಿಯನ್ನು ಸಿದ್ಧಪಡಿಸಲು ಯಾಕೆ ಆಲೋಚಿಸುತ್ತಿದ್ದೀರಾ ಇಂದಿನ ಲೇಖನದಲ್ಲಿ ಇದರ ತಯಾರಿ ಕ್ರಮವನ್ನು ಬಿಟ್ಟೂ ಬಿಡದೆ ನಾವಿಲ್ಲಿ ನೀಡಿದ್ದು ಖಂಡಿತ ಇದು ನಿಮಗೆ ಮೆಚ್ಚುಗೆಯಾಗುತ್ತದೆ.  ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ  ಪ್ರಮಾಣ: 4  ಸಿದ್ಧತಾ ಸಮಯ: 30 ನಿಮಿಷಗಳು  ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು  ಸಾಮಾಗ್ರಿಗಳು: *ಮೀನು - 4  *ಈರುಳ್ಳಿ - 1 (ಮಧ್ಯಮ ಗಾತ್ರದ್ದು, ಹೆಚ್ಚಿದ್ದು)  *ಹಸಿಮೆಣಸು - 2 (ಸೀಳಿದ್ದು)  *ಶುಂಠಿ - ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್  *ಪೆಪ್ಪರ್ ಪೌಡರ್ - 1 ಸ್ಪೂನ್  *ಉಪ್ಪು - ರುಚಿಗೆ ತಕ್ಕಷ್ಟು  *ತೆಂಗಿನ ಕಾಯಿ ಹಾಲು - ...

ಊಟದ ರುಚಿ ಹೆಚ್ಚಿಸುವ ಮಸಾಲಾ ದಾಲ್ ರೆಸಿಪಿ

Image
ಯಾವಾಗಲೂ ಒಂದೇ ರೀತಿಯ ದಾಲ್ ರೆಸಿಪಿಯನ್ನು ಸವಿಯುದೆಂದರೆ ಬೇಜಾರು. ನಿಮ್ಮ ಅದೇ ದಾಲ್‌ಗೆ ಸ್ವಲ್ಪ ಮಸಾಲೆ ಮತ್ತು ಸುಗಂಧವನ್ನು ಸೇರಿಸಿದರೆ ನಿಮ್ಮ ಊಟವೂ ಚೆನ್ನಾಗಿ ಆಗುತ್ತದೆ ಮತ್ತು ರುಚಿಯೂ ತೃಪ್ತಿಯೂ ನಿಮ್ಮದಾಗುತ್ತದೆ ಅಲ್ಲವೇ? ಅಂತಹ ದಾಲ್ ಅನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.  ಮಸಾಲಾ ದಾಲ್ ರೆಸಿಪಿಯನ್ನು ಮಾಡುವುದು ಹೇಗೆಂಬುದು ನಿಮ್ಮ ಚಿಂತೆಯಾಗಿದ್ದರೆ ಆ ಚಿಂತೆಯನ್ನು ದೂರ ಮಾಡುವ ಪರಿಹಾರ ಕೂಡ ನಮ್ಮ ಕೈಯಲ್ಲಿದೆ. ಹೌದು ನಿಮಗಾಗಿ ಈ ಲೇಖನದಲ್ಲಿ ಮಸಾಲಾ ದಾಲ್ ರೆಸಿಪಿಯ ವಿಧಾನವನ್ನು ಇಲ್ಲಿ ನೀಡುತ್ತಿದ್ದೇವೆ. ಮೂರು ಬಗೆಯ ಬೇಳೆ ಕಾಳುಗಳನ್ನು ಬಳಸಿ ಈ ದಾಲ್ ರೆಸಿಪಿಯನ್ನು ನಾವಿಲ್ಲಿ ತಯಾರಿಸಿದ್ದೇವೆ.  ನಿಮ್ಮ ಊಟವನ್ನು ಇನ್ನಷ್ಟು ಮಸಾಲೆಭರಿತವನ್ನಾಗಿಸುವ ಚಮತ್ಕಾರ ಈ ದಾಲ್‌ಗಿದೆ. ನಿಮ್ಮ ರೆಸಿಪಿಗೆ ಈ ಸುವಾಸನೆ ಒಂದು ವಿಭಿನ್ನ ಟೇಸ್ಟ್ ಅನ್ನು ನೀಡುವುದು ಖಂಡಿತ. ದಾಲ್‌ಗೆ ಸೇರಿಸಲಾಗುವ ಸಾಂಬಾರು ಪದಾರ್ಥಗಳು ದಾಲ್‌ನ ರುಚಿಯನ್ನು ಹೆಚ್ಚಿಸಿ ಇನ್ನೂ ಬೇಕೆಂಬ ತುಡಿತವನ್ನು ನಿಮ್ಮಲ್ಲಿ ಹೆಚ್ಚಿಸುತ್ತದೆ. ಸರಳವಾದ ಮಸಾಲಾ ದಾಲ್ ರೆಸಿಪಿ ನಿಮ್ಮ ನಾಲಗೆಯ ಹಸಿವನ್ನು ತಣಿಸುವುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೆ ಮತ್ತೇಕೆ ತಡ, ರುಚಿಯಾದ ಮಸಾಲಾ ದಾಲ್ ರೆಸಿಪಿಯನ್ನು ಪ್ರಯತ್ನಿಸಿ ಮನೆಯವರ ಮೆಚ್ಚುಗೆ ಪಡೆಯಿರಿ. ಚಪಾತಿ ಜೊತೆ ಸವಿಯಲು ದಾಲ್ ರೆಸಿಪಿ  ಪ್ರಮಾಣ: 4  ಸಿದ್ಧತಾ ಸಮಯ: 10 ನಿಮಿ...

ಚಿಕನ್ ಪಲಾವ್-ಮೈಕ್ರೋವೇವ್ ಬಳಸಿ ಥಟ್ಟನೇ ತಯಾರಿಸಿ

Image
ಕೆಲವು ಅಡುಗೆಗಳು ಸ್ವಾದಿಷ್ಟವಾದರೂ ಅದರ ತಯಾರಿಕೆಗೆ ಬೇಕಾಗಿರುವ ಶ್ರಮ ಮತ್ತು ಸಮಯದ ಕಾರಣ ಹೆಚ್ಚಿನವರು ಇದರಿಂದ ದೂರ ಸರಿಯುವುದೇ ಜಾಸ್ತಿ. ಈಗ ಬೆರಳತುದಿಯಲ್ಲಿ ಲಭ್ಯವಿರುವ ಆಪ್ ಅಥವಾ ದೂರವಾಣಿ ಮೂಲಕ ಹೋಟೆಲಿನಿಂದ ತರಿಸಿಕೊಳ್ಳುವುದೇ ಹೆಚ್ಚು. ಆದರೆ ಇವು ಆರೋಗ್ಯಕರವೇ? ದುಬಾರಿಯೇ ಎಂಬ ದ್ವಂದ್ವ ಕೊಂಚವಾದರೂ ಇದ್ದೇ ಇರುತ್ತದೆ. ಮನೆಗೆಲಸವನ್ನು ಸುಲಭಗೊಳಿಸಲು ಆಗಮಿಸಿರುವ ಗೃಹೋಪಯೋಗಿ ಉಪಕರಣಗಳಲ್ಲಿ ಮೈಕ್ರೋವೇವ್ ಓವನ್ ಸಹಾ ಒಂದು. ಆದರೆ ಇದನ್ನು ಬಳಸಿ ಸ್ವಾದಿಷ್ಟವಾದ ಸಾಂಪ್ರಾದಾಯಿಕ ಅಡುಗೆಗಳನ್ನು ಮಾಡಲು ಸಾಧ್ಯವೇ ಎಂಬುದನ್ನು ಯಾರಾದರೂ ತಿಳಿಸಿಕೊಡಬೇಕಷ್ಟೇ. ಇಂದು ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಮಹತ್ವದ ಹೆಜ್ಜೆಯನ್ನಿಡುತ್ತಿದೆ. ದಿನವಿಡೀ ವ್ಯಸ್ತರಿದ್ದರೂ ಕೆಲವೇ ನಿಮಿಷಗಳಲ್ಲಿ ಮೈಕ್ರೋವೇವ್ ಬಳಸಿ ಸ್ವಾದಿಷ್ಟವಾದ ಚಿಕನ್ ಪಲಾವ್ ಮನೆಯಲ್ಲಿಯೇ ತಯಾರಿಸುವ ಬಗೆಯನ್ನು ಇಂದು ನಿಮಗೆ ತಿಳಿಸಲಾಗುತ್ತಿದೆ. ಇದು ಸುಲಭವೂ, ಅಗ್ಗವೂ ಆರೋಗ್ಯಕರವೂ ಆಗಿದೆ ಹಾಗೂ ನಿಮಗೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಮಾತ್ರ ತಯಾರಿಸಿಕೊಳ್ಳಲು ಸಾಧ್ಯವಿರುವುದರಿಂದ ಆಹಾರ ಪೋಲಾಗದಂತೆ ತಡೆಯಲೂಬಹುದು. ರುಚಿಯಲ್ಲಿ ಅದ್ವಿತೀಯ ಅಫ್ಘಾನಿ ಚಿಕನ್ ಪಲಾವ್ ಕೆಲವೇ ನಿಮಿಷಗಳಲ್ಲಿ ತಯಾರಿಸಲು ಸಾಧ್ಯವಿರುವ ಕಾರಣ ಕಚೇರಿಯಲ್ಲಿ ಮೈಕ್ರೋವೇವ್ ಇರುವ ಉದ್ಯೋಗಸ್ಥ ಮಹಿಳೆಯರಿಗಂತೂ ಇದೊಂದು ವರದಾನವಾಗಿದೆ. ಅಗತ್ಯವಿರುವ ಸಾಮಾಗ್ರಿಗಳನ್ನು ಬೆಳಿಗ್ಗೆ ಬರುವಾಗ ಮೈಕ್ರೋವ...

ಆಹಾ ಮಜ್ಜಿಗೆ ಸಾಂಬಾರ್, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

Image
ಪ್ರತೀ ಭಾರತೀಯ ಮನೆಯಲ್ಲಿಯೂ ಸಹ ಮಜ್ಜಿಗೆಯು ಒ೦ದು ಅತ್ಯ೦ತ ಪ್ರಮುಖವಾದ ಪೇಯವಾಗಿ ಬಳಸಲ್ಪಡುವುದರ ಹಿ೦ದೆ ಒ೦ದು ಮಹತ್ತರ ಕಾರಣವಿದೆ. ಅದೇನೆ೦ದರೆ, ಮಜ್ಜಿಗೆಗೆ ಅಧಿಕ ರಕ್ತದೊತ್ತಡವನ್ನು ತಗ್ಗಿಸುವ ಸಾಮರ್ಥ್ಯವಿದೆ, ಶರೀರದಿ೦ದ ತ್ಯಾಜ್ಯವಿಷಪದಾರ್ಥಗಳನ್ನು ನಿವಾರಿಸುತ್ತದೆ, ಹಾಗೂ ಇವೆಲ್ಲಕ್ಕಿ೦ತಲೂ ಹೆಚ್ಚಾಗಿ ಮಜ್ಜಿಗೆಯು ನಮ್ಮ ಒಡಲನ್ನು ತ೦ಪಾಗಿರಿಸುತ್ತದೆ. ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಮಜ್ಜಿಗೆ ಸಾಂಬಾರ್ ರೆಸಿಪಿಯು ನಿಮಗೆ ಒಡಲನ್ನು ತಂಪಾಗಿಸುವ ಅನುಭವವನ್ನು ನೀಡುವುದರ ಜೊತೆಗೆ ಮಜ್ಜಿಗೆಯ ಇನ್ನಷ್ಟು ಪ್ರಮುಖ ಅಂಶಗಳು ನಿಮ್ಮ ದೇಹವನ್ನು ತಲುಪುವಂತೆ ಮಾಡುತ್ತವೆ. ನೀವು ಗಡಿಬಿಡಿಯಲ್ಲಿ ಇದ್ದೀರಿ ಮತ್ತು ಕೂಡಲೇ ಬಾಯಿಗೆ ರುಚಿ ಎನಿಸುವ ಸಾಂಬಾರ್ ಅನ್ನು ನೀವು ತಯಾರಿಸಬೇಕು ಎಂದಾದಲ್ಲಿ ಈ ಸಾಂಬಾರ್ ನಿಮಗೆ ಪ್ರಯೋಜನಕಾರಿಯಾಗುವುದು ಖಂಡಿತ. ಈ ಒ೦ದು ವಿಶಿಷ್ಟವಾದ ಸಾ೦ಬಾರ್‌ನ ರೆಸಿಪಿಯ ತಯಾರಿಕೆಯಲ್ಲಿ ಬಳಸಲ್ಪಡುವ ತರಕಾರಿಗಳು ಸಾ೦ಬಾರ್‌ನ ಸ್ವಾದವನ್ನು ನಿರ್ಣಯಿಸುತ್ತವೆ. ಬಾಯಿಯಲ್ಲಿ ನೀರೂರುವ೦ತೆ ಮಾಡುವ ಈ ಸ್ವಾದಿಷ್ಟವಾದ ಮಜ್ಜಿಗೆ ಸಾ೦ಬಾರ್ ಅಥವಾ ಮಜ್ಜಿಗೆ ರಸ೦ನ ರೆಸಿಪಿಯನ್ನು ತಯಾರಿಸುವುದಕ್ಕಾಗಿ, ಈ ಕೆಳಗೆ ನಿಮ್ಮೊಡನೆ ನಾವು ಹ೦ಚಿಕೊ೦ಡಿರುವ ರೆಸಿಪಿಯತ್ತ ಒಮ್ಮೆ ದೃಷ್ಟಿ ಹಾಯಿಸಿರಿ. ಹ೦ತ ಹ೦ತವಾಗಿ ಮಜ್ಜಿಗೆ ಸಾ೦ಬಾರ್ ಅನ್ನು ತಯಾರಿಸುವ ವಿಧಾನವನ್ನು ಇಲ್ಲಿ ನೋಡಿಕೊಳ್ಳಿರಿ  ಪ್ರಮಾಣ  *ನಾ...