ಸರಳವಾದ ರುಚಿಭರಿತ ಪಾಲಾಕ್ ಚಿಕನ್ ಕರಿ ರೆಸಿಪಿ
ಪಾಲಾಕ್ ಚಿಕನ್ ಕರಿ ಎಂಬುದು ಒಂದು ಸರಳವಾದ ಖಾದ್ಯವಾಗಿದ್ದು, ಅಧಿಕ ಪೋಷಕಾಂಶಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ. ವಾರದ ದಿನಗಳಲ್ಲಿ ಮಾಡಲು ಇದು ಹೇಳಿ ಮಾಡಿದ ಖಾದ್ಯವಾಗಿರುತ್ತದೆ. ಪಾಲಾಕ್ ಚಿಕನ್ ಭಾರತದಲ್ಲಿ ತುಂಬಾ ಜನಪ್ರಿಯವಾಗಿದೆ, ಏಕೆಂದರೆ ಭಾರತದಲ್ಲಿ ಪಾಲಾಕ್ ಹೇರಳವಾಗಿ ದೊರೆಯುತ್ತದೆ. ಆದರೆ ಬಹುತೇಕ ಜನರು ಇದರ ಕಹಿ ರುಚಿಯಿಂದಾಗಿ ಇದನ್ನು ತಮ್ಮ ಆಹಾರದಲ್ಲಿ ಸೇರಿಸಲು ಹಿಂದೇಟು ಹಾಕುತ್ತಾರೆ. ಹಾಗಾದರೆ ಯಾವ ಕಾರಣಕ್ಕಾಗಿ ಪಾಲಾಕ್ ಅನ್ನು ಚಿಕನ್ ಜೊತೆಗೆ ಸೇರಿಸಬಹುದು? ಏಕೆಂದರೆ ಇವೆರಡು ಬೆರೆತರೆ ರುಚಿ ಮತ್ತು ಆರೋಗ್ಯ ಎರಡು ದೊರೆಯುತ್ತವೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಮಕ್ಕಳಿದ್ದಲ್ಲಿ, ಈ ಖಾದ್ಯವು ನಿಮ್ಮ ಸಹಾಯಕ್ಕೆ ಬರುತ್ತದೆ. ಏಕೆಂದರೆ ಮಕ್ಕಳು ಪಾಲಾಕ್ ಸೇವಿಸಲು ಇಷ್ಟಪಡುತ್ತಾರೆ. ಜೊತೆಗೆ ಇದು ಪೋಷಕಾಂಶಗಳ ಆಗರ. ಅದರಲ್ಲೂ ಚಿಕನ್ ಜೊತೆಗೆ ಸೇರಿದಾಗ ಇದರ ರುಚಿ ಇಮ್ಮಡಿಗೊಳ್ಳುತ್ತದೆ. ಇದನ್ನು ನೀವು ರೋಟಿ ಅಥವಾ ಅನ್ನದ ಜೊತೆಗೆ ಸಹ ಬಡಿಸಬಹುದು. ಗರಿಗರಿಯಾದ ಕೇರಳ ಚಿಕನ್ ಫ್ರೈ ರೆಸಿಪಿ ಬೋಲ್ಡ್‌ಸ್ಕೈ ನಿಮಗಾಗಿ ಸರಳವಾಗಿ ಮತ್ತು ಶೀಘ್ರವಾಗಿ ರುಚಿ ರುಚಿಯಾದ ಪಾಲಾಕ್ ಚಿಕನ್ ಕರಿ ಮಾಡುವ ಬಗೆಯನ್ನು ತಿಳಿಸಿಕೊಡುತ್ತಿದೆ. ಈ ಖಾದ್ಯ ತಯಾರಿಸಲು ಬಳಸುವ ಹಲವಾರು ಪದಾರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ! ಈ ಪಾಲಾಕ್ ಚಿಕನ್ ಕರಿಯನ್ನು ತಯಾರಿಸುವುದು ತುಂಬಾ ಸರಳ. ಬನ್ನಿ ಭಾರತೀಯ ಶೈಲಿಯಲ್ಲಿ ಪಾಲಾಕ್ ಚಿಕನ್ ಕರ...